Tejasvi SaMshodhana kendradha bhoomigaagi sahi sangrahane
Sign Now
Poorna chandra thejasvi smaranaartha saMshodhana kendra sthaapanege agathyavaadha bhoomigaagi karnataka sarakaarakke oththaaya maadalu tammellara sahi ya agathyavidhe adhakkaagi ee petition. aadhakaarana thaavellaru sahi maadabekaagi korike
satheesh gowda
aviratha
bengalooru
ಮಾನ್ಯರೆ,
ವಿಷಯ : ಪೂರ್ಣಚಂದ್ರ ತೇಜಸ್ವಿ ಯವರ ಸ್ಮರಣಾರ್ಥ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅದಕ್ಕೆ ಅಗತ್ಯವಾದ ಭೂಮಿಗಾಗಿ ಕರ್ನಾಟಕ ಸರಕಾರಕ್ಕೆ ಒತ್ತಾಯ ಮಾಡಲು ತಮ್ಮೆಲ್ಲರ ಸಹಿಯ ಅಗತ್ಯವಿದೆ ಅದಕ್ಕಾಗಿ ಅವಿರತ ಸಂಸ್ಥೆ ಮುಖಾಂತರ ಈ ಪೆಟಿಷನ್ ಹಾಕುತ್ತಿದ್ದೇವೆ ಆದ ಕಾರಣ ತಾವೆಲ್ಲರು ಸಹಿ ಮಾಡಬೇಕಾಗಿ ವಿನಂತಿ.
ನಮ್ಮ ನೆಚ್ಚಿನ ಮಾರ್ಗದರ್ಶಿ , ಸಾಹಿತಿ ಎಲ್ಲಕ್ಕಿಂತ ಹೆಚ್ಚಾಗಿ ಅತ್ಯುತ್ತಮ ಮಾನವತಾವದಿಯಾಗಿದ್ದ ಪೂರ್ಣಂದ್ರ ತೇಜಸ್ವಿಯವರ ಅಗಲಿಕೆಯಿಂದ ನಮಗೆಲ್ಲ ದಿಕ್ಕುತೋಚದಂತಾಗಿರುವುದು ಸರ್ವವಿದಿತ.
ತೇಜಸ್ವಿಯವರ ಮಾರ್ಗದಲ್ಲಿ ನಡೆದು ಏನಾದರೂ ಮಾಡಬೇಕೆಂಬ ತುಡಿತ ಎಲ್ಲರಲ್ಲೂ ಇರುತ್ತದೆ.
ಅಗಲಿಕೆ ಅನಿವಾರ್ಯವಾದ್ದರಿಂದ ಅಗಲಿದ ಚೇತನಕ್ಕೆ ಸರಿಯಾದ ಶ್ರದ್ಧಾಂಜಲಿ ಸಲ್ಲಿಸು ನಿಟ್ಟಿನಲ್ಲಿ ತೇಜಸ್ವಿಯವರ ಆಪ್ತರಲ್ಲಿ ಒಬ್ಬರಾದ ಪ್ರದೀಪ ಕೆಂಜಿಗೆಯವರು, ತೇಜಸ್ವಿಯವರ ತತ್ವ, ಆದರ್ಶ ಹಾಗೂ ಪರಿಸರ ಪ್ರಜ್ಞೆಯ ಬಗ್ಗೆ ನಾಡಿನ ಮಕ್ಕಳಿಗೆ ತಿಳಿಸಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ.
ತೇಜಸ್ವಿ ಸಶೋಧನಾ ಕೇಂದ್ರದಿಂದ ಮಕ್ಕಳಿಗೆ ವೈಜ್ಞಾನಿಕ ಹಾಗು ಪರಿಸರ ಕಾಳಜಿ ಹೆಚ್ಚಿಸು ಯೋಜನೆಯಿದೆ. ಇದಕ್ಕೆ ಅಗತ್ಯವಾದ ಭೂಮಿಯನ್ನು(ಕೇಂದ್ರ ಸ್ಥಾಪನೆಗೆ ಬೇಕಾದ ಜಾಗ) ನೀಡುವಂತೆ ಸರ್ಕಾರವನ್ನು ಈ ಮುಖಾಂತರ ಕೋರುತ್ತಿದ್ದೇವೆ. ಪ್ರದೀಪ್ ಕೆಂಜಿಗೆಯವರ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡುವ ಸಲುವಾಗಿ ಅವಿರತ ಸಂಸ್ಥೆಯು ತೇಜಸ್ವಿ ಬೆಂಬಲಿಗರ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದೆ.
ನಾಡಿನಾದ್ಯಂತಇರುವ ತೇಜಸ್ವಿ ಅಭಿಮಾನಿಗಳು ಈ ಸದುದ್ದೇಶಕ್ಕೆ ನೆರವಾಗುತ್ತಾರೆ ಎಂಬ ನಂಬಿಕೆ.
ಆಸಕ್ತರು ಸಹಿ ಮಾಡಿ, ಬೆಂಬಲ ನೀಡಿ
ವಂದನೆಗಳು
ಸತೀಶ್ ಗೌಡ
ಅವಿರತ
ಬೆಂಗಳೂರು
If you already have an account please sign in, otherwise register an account for free then sign the petition filling the fields below.
Email and password will be your account data, you will be able to sign other petitions after logging in.
Continue with Google